ಕೊಡಗಿನ ಪೊನ್ನಂಪೇಟೆ ತಾಲೂಕಿನ ಕುಟ್ಟ ಸಮೀಪ ಮಂಚಳ್ಳಿ ಎಂಬಲ್ಲಿ ಹೊಳೆಯಲ್ಲಿ 3 ತಿಂಗಳ ಗಂಡು ಮರಿಯಾನೆ ತೇಲಿಬಂದಿದ್ದು, ರಕ್ಷಣೆ ಮಾಡಲಾಗಿದೆ. ತಾಯಿ ಜೊತೆ ಆಹಾರ ಅರಸಿಕೊಂಡು ಬಂದಾಗ ಆಯತಪ್ಪಿ ಹೊಳೆಗೆ ಬಿದ್ದಿದೆ. ರಾಜ ತಿಮ್ಮಯ್ಯ ಅನ್ನೋವ್ರ ತೋಟದ ಬಳಿ ಸಿಕ್ಕಿದ್ದು, ಮರಿಯಾನೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ನೀಡಲಾಗಿದೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಮರಿಯಾನೆಯನ್ನು ತಿತಿಮತಿ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಬಿಡಲಾಗಿದೆ.
#publictv #newscafe #hrranganath